Index   ವಚನ - 48    Search  
 
ಕೂರ್ಮನ ಮೋಹ, ಉರಗನ ಧ್ಯಾನ, ವಿಹಂಗನ ಚಿತ್ತ, ಪಿಪೀಲಿಕನ ಜ್ಞಾನ, ಮಯೂರನ ಎಚ್ಚರಿಕೆ, ದಯಾಪರನ ಸರ್ವಗುಣ, ಉಭಯವಳಿದವನ ನಿರ್ಮೋಹ, ಅಪ್ರಮಾಣನ ವಿಶ್ವಾಸ, ಕುರುಹುದೋರುವುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.