Index   ವಚನ - 47    Search  
 
ಕುಸುಮಗಂಧ ಹಿಸುಕಿದಲ್ಲಿ ದುರ್ಗಂಧ. ಉದಕದಲ್ಲಿ ನಿರ್ಮಲ, ಕೆದಕಿದಲ್ಲಿ ಮಲ. ವಿನಯದಿಂದ ಸುಗುಣ, ದುರ್ವಾಸದಿಂದ ಕರ್ಕಶ. ಇಂತೀ ಉಭಯಂಗಳೆಲ್ಲ ಕೂಡಿ, ಜೀವ ಪರಮನೆಂಬ ಅರಿವು ಮರವೆ ಎರಡಳಿದು, ಪಂಕವನೀಂಟಿದ ಸುಜಲ ನಿಂದಂತೆ, ಏಕಚಿತ್ತಮೂರ್ತಿಯಾದಲ್ಲಿ, ಮನಸಂದಿತ್ತು ಮಾರೇಶ್ವರಾ.