Index   ವಚನ - 75    Search  
 
ನಾ ನೀನೆಂಬ ಉಭಯವ ವಿಚಾರಿಸುವುದು ಅದೇನು ಹೇಳಾ ? ನಾನೆಂದಡೆ ಎನಗೆ ಹೊರಗು, ನೀನೆಂದಡೆ ಉಭಯಭಿನ್ನ. ಏನೂ ಎನ್ನದಿದ್ದಡೆ ಅರಿವಿಂಗೆ ಕುರುಹಿಲ್ಲ. ಉಭಯವ ವಿಚಾರಿಸಿ ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.