ಭಟಂಗೆ ಭಾಷೆಯಲ್ಲದೆ, ಅಂಜಿ ತೊಲಗಿದವಂಗೆ
ಚೌಭಟದ ರಣರಂಗವುಂಟೆ ?
ವಾಗದ್ವೈತಿ ಸ್ವಯಾನುಭಾವಕ್ಕೆ ಸಂಬಂಧಿಯಪ್ಪನೆ ?
ಕೀಟಕ ಅರುಣನ ಕಿರಣವ ಜರೆದಂತೆ,
ದೂಷಣವ ಮಾಡುವಲ್ಲಿ,
ಆ ದೂಷಣಕ್ಕೆ ತಾನೊಳಗಹಲ್ಲಿ,
ತಿಳಿದು ವಿಚಾರಿಸುವಲ್ಲಿ,
ಒಳಹೊರಗುಯೆಂಬುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Bhaṭaṅge bhāṣeyallade, an̄ji tolagidavaṅge
caubhaṭada raṇaraṅgavuṇṭe?
Vāgadvaiti svayānubhāvakke sambandhiyappane?
Kīṭaka aruṇana kiraṇava jaredante,
dūṣaṇava māḍuvalli,
ā dūṣaṇakke tānoḷagahalli,
tiḷidu vicārisuvalli,
oḷahoraguyembudakke munnave
manasandittu mārēśvarā.