ಮೋಹದಿಂದ ಮಾಡುವುದೆಲ್ಲ ಬ್ರಹ್ಮನ ಪೂಜೆ.
ಭಾವದಿಂದ ಮಾಡುವುದೆಲ್ಲ ವಿಷ್ಣುವಿನ ಪೂಜೆ.
ನಿರ್ಭಾವದಿಂದ ಕಂಡೆಹೆನೆಂಬುದೆಲ್ಲ ರುದ್ರಪದ.
ಇಂತೀ ತ್ರಿವಿಧಕ್ಕೆ ಹೊರಗಾಗಿ ನಿಂದುದು,
ಮನಸಂದುದು ಮಾರೇಶ್ವರಾ.
Art
Manuscript
Music
Courtesy:
Transliteration
Mōhadinda māḍuvudella brahmana pūje.
Bhāvadinda māḍuvudella viṣṇuvina pūje.
Nirbhāvadinda kaṇḍ'̔ehenembudella rudrapada.
Intī trividhakke horagāgi nindudu,
manasandudu mārēśvarā.