Index   ವಚನ - 90    Search  
 
ಲಿಂಗದೇಹಿಯ ಅಂಗದಲ್ಲಿ ತೋರುವ ತೋರಿಕೆ, ಬೇರೊಂದು ಪ್ರಕೃತಿಭಾವದಲ್ಲಿ ಕಂಡಡೆ, ಲಿಂಗದ ಅಂಗವಾದುದಕ್ಕೆ ಅದೇ ದೂರ. ಅರಿದು ಮರೆವುದೆಲ್ಲ ಲಿಂಗಮಯವಾಗಿ, ಪರುಷದ ಪುತ್ತಳಿಯಂತೆ, ಎಲ್ಲಿ ಮುಟ್ಟಿದಡಲ್ಲಿ ಲೋಹಕುಲ ಶುದ್ಧವಾದಂತೆ, ಅಂಗಲಿಂಗಸಂಯೋಗ. ಇಂತೀ ಭಾವ ಅಳವಟ್ಟಲ್ಲಿ, ಉಭಯಗುಣ ಶುದ್ಧ, ಮನಸಂದಿತ್ತು ಮಾರೇಶ್ವರಾ.