Index   ವಚನ - 7    Search  
 
ಮನ ಬುದ್ಧಿ ಚಿತ್ತ ಅಹಂಕಾರವೆಂಬ ನಾಲ್ಕು ಲೋಹದಿಂದ ಸರ್ವೇಂದ್ರಿಯದ ಮೊತ್ತ. ಮನ ವಸ್ತುವ ಮುಟ್ಟದೆ, ನಿಜನಿಷ್ಠೆಯನರಿಯದೆ, ಬಹುಮೊತ್ತದ ಮಾತಲ್ಲದ ಮಾತನಾಡುವದು, ಕಳ್ಳವಣ, ಸಲ್ಲದ ತಾರ ಇವೆಲ್ಲವ ತಿಳಿದು ಕಂಬಳಿಯ ಚೀಲದವನ ಬೆಂಬಳಿಯಲ್ಲಿ ಬನ್ನಿ. ನಿಮಗಲ್ಲದ ಒಡವೆಯನೊಳ್ಳಿತ್ತು ಮಾಡಿಕೊಡುವೆ, ಊರ್ಧ್ವರೇತೋಮೂರ್ತಿ ಶ್ವೇತ ಸ್ವಯಂಭು ಕಪಿಲೇಶ್ವರಲಿಂಗ ಸಾಕ್ಷಿಯಾಗಿ.