ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ,
ಅಹುದು ಅಲ್ಲ ಎಂಬ ಕೊಳಗದ
ಕೊರಳಿನಲ್ಲಿ ಅಳೆವುತ್ತೈದಾನೆ.
ಕೊಳಗದ ಕೊರಳು ತುಂಬಿ,
ಅಳೆವಾತನ ಹೃದಯ ತುಂಬಿ,
ಗುಹೇಶ್ವರಲಿಂಗದ ಕಂಗಳು ತುಂಬಿ,
ಮಂಗಳಮಯವಾಯಿತ್ತು!
Transliteration Kanakācaladalli dinanāyaka emba ratna huṭṭi,
ahudu alla emba koḷagada
koraḷinalli aḷevuttaidāne.
Koḷagada koraḷu tumbi,
aḷevātana hr̥daya tumbi,
guhēśvaraliṅgada kaṅgaḷu tumbi,
maṅgaḷamayavāyittu!
Hindi Translation कनकाचल में दिननायक नामक रत्न पैदा होकर,
जी नहीं (जी हाँ, जी नहीं) जैसे सेर के गले में माप रहा है।
सेर का गला भर मापनेवाले का मन भर
गुहेश्वर लिंगकी आँख भर मंगलमय हुआ था।
Translated by: Eswara Sharma M and Govindarao B N