ವಚನ - 1046     
 
ಕಬ್ಬಿನ ರಸದೊಳಗಣ ಮುತ್ತನೊಡೆದು ನೋಡಲು ಹುಬ್ಬಿನ ಮೇಲಣ ನೀಲದ ಪ್ರಭೆಯ ನೋಡಾ! ವಜ್ರದ ಚಂಡಿಕೆಯಲ್ಲಿ ಕಟ್ಟಿ ಆಳುವರು! ಉಭಯ ಕವಿಗಳಿಗೆ ಅರಿಯಬಾರದು. ಗುಹೇಶ್ವರನ ಸ್ವಾನುಭಾವಿಗಳಿಗಲ್ಲದೆ ತಿಳಿಯಬಾರದು.