ಕರ್ಮ ನಾಸ್ತಿ ಎಂಬೆ, ಅನಾಸ್ತಿ ಎಂಬೆ.
ಜ್ಞಾನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ.
ಸಂಗಡ ಸಹಿತ ಕರಸ್ಥಲಕ್ಕೆ ಬಂದು,
ನೀನು ಬಯಲಾಗೆಯಲ್ಲಾ.
ಎನ್ನನೂ ಬಯಲು ಮಾಡೆ ಗುಹೇಶ್ವರಾ.
Transliteration Karma nāsti embe, anāsti embe.
Jñāna [da] kobbinali ulive, ulidante naḍeve.
Saṅgaḍa sahita karasthalakke bandu,
nīnu bayalāgeyallā.
Ennanū bayalu māḍe guhēśvarā.
Hindi Translation कर्म नास्ति कहूँ, अनास्ति कहूँ।
ज्ञान के गर्व में हूँ , कहने जैसे चलता हूँ।
साथ करस्थल पर आकर, तुम भी मुक्त न हुए ;
मुझे भी मुक्त न किया, गुहेश्वरा।
Translated by: Eswara Sharma M and Govindarao B N
Tamil Translation கர்மம் இல்லை என்று கூறவியலாது, உள்ளது எனக் கூறவியலாது
ஞானப்பூரிப்பில் உரைப்பேன், உரைத்தவாறு நடப்பேன்
சரணருடன் கரத்தலத்திற்கு வந்து நீ இணைந்தனை.
என்னையும் இணையச் செய்வாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಾಸ್ತಿ ಎಂಬೆ = ಇದೆ ಎಂದೂ ಹೇಳಲಾರೆ; ಕರ್ಮ = ಇಷ್ಟಲಿಂಗಾರ್ಚನಾದಿ ಕರ್ಮ, ; ಜ್ಞಾನ = ಲಿಂಗಜ್ಞಾನ; ಕರವ ತುಂಬಿದ ಲಿಂಗ ದೃಷ್ಟಿಯನ್ನು ತುಂಬಿದಾಗ ಉಂಟಾಗುವ ಲಿಂಗಾನುಭೂತಿ; ನಾಸ್ತಿ ಎಂಬೆ = ಇಲ್ಲವೇ ಇಲ್ಲ ಎನ್ನಲಾರೆ; ಬಯಲಾಗು = ಅಡಗು, ತುಂಬಿನಿಲ್ಲು, ಒಂದಾಗು; ಸಂಗಡ ಸಹಿತ = ಶರಣರ ಸಂಗ ಸಹಿತವಾಗಿ;
Written by: Sri Siddeswara Swamiji, Vijayapura