Index   ವಚನ - 1063    Search  
 
ಕಾಣದುದ ಕಂ[ಡ], ಕೇಳದುದ ಕೇಳಿ[ದ], ಮುಟ್ಟಬಾರದುದ ಮುಟ್ಟಿದ, ಅಸಾಧ್ಯವ ಸಾಧಿಸಿದ, ತಲೆಗೆಟ್ಟುದ ತಲೆವಿಡಿದ, ನೆಲೆಗೆಟ್ಟುದ ನಿರ್ಧರಿಸಿದ, ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ ಶರಣೆಂದು ಶುದ್ಧನಾದೆನು.