ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್‍ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ!
ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
ದ್ವೈತಾದ್ವೈತವ ನೀಕರಿಸಿ,
ನಿರ್ವಾಣ ನಿಷ್ಪತಿಯಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮ
ಸುಖಿಯಾಗಿರ್ದನು.
Transliteration Kāyaguṇavaḷidu jīvanmuktanāda baḷika
samyakjñānavemba śānti dorekoṇḍittu nōḍire!
Antaraṅga bahiraṅgavembudanu ariyanāgi
dvaitādvaitava nīkarisi,
nirvāṇa niṣpatiyāgi,
guhēśvarā nim'ma śaraṇananupama
sukhiyāgirdanu.
Hindi Translation शरीर गुण मिठकर जीवन्मुक्त होने के बाद
सम्यक्ज्ञान जैसी शांति मिली थी देखिये !
अंतरंग बहिरंग कहना न जाने
दैताद्वैत दूर कर, निर्वाण निष्पत्ती से,
गुहेश्वरा तुम्हारा शरण अनुपम सुखी रहा था।
Translated by: Eswara Sharma M and Govindarao B N