Index   ವಚನ - 1090    Search  
 
ಕಾಯ ಲಿಂಗೈಕ್ಯವೆ? ಅಲ್ಲ ನಿಲ್ಲು. ಜೀವ ಲಿಂಗೈಕ್ಯವೆ? ಅಲ್ಲ ನಿಲ್ಲು. ಕಾಯದ ಜೀವದ ಸಂದ ಬಲ್ಲಡೆ-ಆತ ಲಿಂಗೈಕ್ಯ. ಒಂಬತ್ತು ದ್ವಾರಮಂ ಕಳೆದು, ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ ಆತನೆ ಗುರು ಕಾಣಾ ಗುಹೇಶ್ವರಾ.