ಕಾಯವಿಡಿದು ಲಿಂಗವಿದೆ,
ಲಿಂಗವಿಡಿದು ಕಾಯವಿದೆ.
ಅರಿವಿಡಿದು ಮರಹಿದೆ,
ಮರಹುವಿಡಿದು ತೋರುವ ಅರಿವಿದೆ.
ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿ ಎಂತು ಹೇಳಾ?
ಸ್ವರವಿಡಿದು ಸಬುದ ಸಮರಸವಾದ ಪರಿ ಎಂತು ಹೇಳಾ?
`ದೇವ' `ಭಕ್ತ' ಎಂಬ ನಾಮ ಸೀಮೆಯಡಗಿ
ಗುಹೇಶ್ವರಲಿಂಗದಲ್ಲಿ ತದುಗತವಾಗಿದ್ದ ಪರಿ ಎಂತು ಹೇಳಾ
ಸಂಗನಬಸವಣ್ಣಾ?
Transliteration Kāyaviḍidu liṅgavide,
liṅgaviḍidu kāyavide.
Ariviḍidu marahide,
marahuviḍidu tōruva arivide.
Liṅgāṅgaveraḍū nim'malli aikyavāda pari entu hēḷā?
Svaraviḍidu sabuda samarasavāda pari entu hēḷā?
`Dēva' `bhakta' emba nāma sīmeyaḍagi
guhēśvaraliṅgadalli tadugatavāgidda pari entu hēḷā
saṅganabasavaṇṇā?
Hindi Translation शरीर अपनाकर लिंग है, लिंग अपनाकर शरीर है।
ज्ञान अपनाकर भूल है, भूल अपनाकर दिखाना ज्ञान है।
लिंगांग दोनों तुममें ऐक्य बने स्थिति कैसे कहो ?
स्वर अपनाकर शब्द समरस हुएस्थिति कैसे कहो?
‘देव’ ‘भक्त’ कहे नाम सीमा पार
गुहेश्वर लिंग में तद्गत हुआ कैसे कहो
संगनबसवण्णा ।
Translated by: Eswara Sharma M and Govindarao B N