Index   ವಚನ - 1111    Search  
 
ಕಾಲು ಮುಖವ ತೊಳೆದುಕೊಂಡ ಬಳಿಕ ಮಜ್ಜನಕ್ಕೆರೆವಿರಿ, ತಾನು ಲಿಂಗವೊ? ತನ್ನ ಕೈಯದು ಲಿಂಗವೊ? ಆವುದು ಲಿಂಗ ಹೇಳಿರೆ? ಲಿಂಗಸ್ಥಲವನರಿಯದೆ, ಎರಡರಿಂದ ಕೆಟ್ಟರು ಗುಹೇಶ್ವರಾ.