ಪೃಥ್ವಿಕುಲಮಂಟಪದ ಮೇಲೆ ಪಾದಶಿಲೆ ಬಿಗಿದು,
ತಳಕಂಭ ಕಳಸದ ಮೇಲೆ ಕೆಸರುಗಲ್ಲು.
ಒಂದು ಮಠಕ್ಕೆ ಒಂಬತ್ತು ತುಂಬಿಯ ಆಳಾಪ.
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ!
ಅಂಗಜನ ಪಡೆ ಕೋಟಿ, ಮುಂಡವೆದ್ದು ಕುಣಿವಲ್ಲಿ,
ರಣವುಂಡ ಭೂಮಿಯನು ಮೀರಿದನು ಗುಹೇಶ್ವರ!
Hindi Translationपृथ्वी कुलमंटप पर पद्मासन में बैठकर,
तलखंब के कलश पर सहस्रार विस्तार-
एक मठके नवरस आलाप।
भिन्नरंग परअधिक संयोग।
अंगज सेना करोड़ शरीर उठ नाचते
युद्धभूमि ने निगला श्रेष्ट गुहेश्वरा।
Translated by: Eswara Sharma M and Govindarao B N
English Translation
Tamil Translationநிலத்தில் அமைதியான இடத்தில் ஆசனத்திலமர்ந்து,
ஆதாரமான முதுகெலும்புடனிணைந்த தலையிலுள்ள
ஆயிரம் இதழ்த்தாமரையான “ஸஹஸ்ரார”ம்
உறுதியாக நிலைத்துள்ள பக்தனின் உடலில்
ஒன்பது வகையான நாதங்களை நிறைத்து,
பிரம்மத்தலத்திலுள்ள ஜோதிர்லிங்கத்தின் ஒளிரும் நிறக்கற்றைகள்
விவேகமற்று எண்ணற்ற விகற்பங்கள் ஆடியபொழுது
அவ்வனைத்தையும் மீறி பக்தன் ஒன்றினன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಭಕ್ತಸ್ಥಲ
ಶಬ್ದಾರ್ಥಗಳುಅಂಗಜನ ಪಡೆ ಕೋಟಿ ಮುಂ = ವಿವೇಕರಹಿತ ಕೋಟ್ಯಂತರ ಕಾಮಾದಿ ಮನೋವಿಕಾರಗಳು; ಎದ್ದು ಕುಣಿವಲ್ಲಿ = ಹುಚ್ಚೆದ್ದು ಕುಣಿಯುವಾಗ; ಒಂದು ಮಠ = ಮೇಲೆ ಹೇಳಿದ ರೀತಿಯಲ್ಲಿ ಸ್ಥಿರಗೊಂಡಿರುವ ಭಕ್ತನ ದೇಹ; ಒಂಭತ್ತು ತುಂಬಿಯಾಳಾಪ = ಒಂಭತ್ತು ಬಗೆಯ ಮಧುರನಾದಗಳು; ಅವು ಭ್ರಮರನಾದ, ವೇಣುನಾದ, ಘಂಟಾನಾದ, ಭೇರಿನಾದ, ಮೇಘನಾದ
ಪ್ರಣವನಾದ, ದಿವ್ಯನಾದ, ಸಿಂಹನಾ; ಕಳಶ = ಶಿರಸ್ಸು; ಕೆಸರುಗಲ್ಲು = ಆ ಶಿರಸ್ಸಿನೊಳಗಿರುವ ಸಹಸ್ರಾರದ ವಿಸ್ತಾರ; ತಳಕಂಭ = ಆಧಾರದಿಂದ ಪ್ರಾರಂಭವಾಗುವ ಮೇರುದಂಡ; ಪದಶಿಲೆ ಬಿಗಿದು = ಆಸನಬದ್ದನಾಗಿ ಕೂಡುವುದು; ಪೃಥ್ವಿಕುಳಮಂಟಪ = ಶಿವಯೋಗಸಾಧನೆಗೆ ಯೋಗ್ಯವಾದ ಪ್ರಶಾಂತ ಸ್ಥಳ; ಬಗೆಯ ಬಣ್ಣ = ಮನೋಗತವಾದ ಬಣ್ಣ ಅಂದರೆ ಬ್ರಹ್ಮಸ್ಥಲದಲ್ಲಿರುವ ಜ್ಯೋತಿರ್ಲಿಂಗದ ಪ್ರಭಾವರ್ಣಗಳು; ರಣವುಂಡ ಭೂಮಿ = ಅವನ್ನೆಲ್ಲ ನುಂಗಿಹಾಕಿದ ಭೂಮಿ; Written by: Sri Siddeswara Swamiji, Vijayapura