•  
  •  
  •  
  •  
Index   ವಚನ - 1132    Search  
 
ಕೈಯಲ್ಲಿ ಡಾಣೆ, ಮನದಲ್ಲಿ ಕ್ರೋಧ, ವಚನದಲ್ಲಿ ಕಿಂಕಲ, ಲಿಂಗದ ವಾರ್ತೆ ನಿನಗೇಕೆ ಹೇಳಾ ಬಸವಾ? ಜಂಗಮವೆ ಲಿಂಗವೆಂಬ ಶಬ್ದಸಂದೇಹಸೂತಕಿ ನೀನು, ಸಜ್ಜನ ಸದ್ಭಕ್ತಿಯ ಮಾತು ನಿನಗೇಕೆ ಹೇಳಾ ಬಸವಾ? ಕಬ್ಬುನದ ರೂಪು ಪರುಷವ ಮುಟ್ಟಿದಡೆ ಹೊನ್ನಾಯಿತ್ತಲ್ಲದೆ ಪರುಷವಪ್ಪುದೆ ಹೇಳಾ ಬಸವಾ? ಗುಹೇಶ್ವರನೆಂಬ ಪರುಷದ ಪುತ್ಥಳಿಯನರಿಯಬಲ್ಲಡೆ ನಿನ್ನ ನೀನೆ ತಿಳಿದು ನೋಡಾ ಸಂಗನಬಸವಣ್ಣಾ.
Transliteration Kaiyalli ḍāṇe, manadalli krōdha, vacanadalli kiṅkala, liṅgada vārte ninagēke hēḷā basavā? Jaṅgamave liṅgavemba śabdasandēhasūtaki nīnu, sajjana sadbhaktiya mātu ninagēke hēḷā basavā? Kabbunada rūpu paruṣava muṭṭidaḍe honnāyittallade paruṣavappude hēḷā basavā? Guhēśvaranemba paruṣada put'thaḷiyanariyaballaḍe ninna nīne tiḷidu nōḍā saṅganabasavaṇṇā.
Hindi Translation हाथ में डंडा, मन में क्रोध , वचन में विनय , लिंग की वार्ता तुझे क्यों कह बसवा ? जंगम ही लिंग कहें शब्द संदेह सूतकी तू। सज्जन सद्‌भक्ति की बात तुझे क्यों कह बसवा ? लोहे का रूप परुष छूने से सोने हुए बिना परुष बनता बसव ? गुहेश्वर जैसे परुष पुत्थली जान सके तो तू खुद ही समझ देख संगनबसवण्णा। Translated by: Eswara Sharma M and Govindarao B N