ವಚನ - 1142     
 
ಕ್ಷೀರಸಾಗರದೊಳಗಿರ್ದ ಹಂಸೆಗೆ ಹಾಲ ಬಯಸಲುಂಟೆ? ಪುಷ್ಪದೊಳಗಿರ್ದ ತುಂಬಿಗೆ ಪರಿಮಳವನರಸಲುಂಟೆ? ಕಡಲೊಡಗಿರ್ದ ಕಪ್ಪೆ ಜಲವ ಬಯಸಲುಂಟೆ? ಇದೆಂತಯ್ಯಾ ತಾವು ಲಿಂಗದೊಳಗಿರ್ದು, ಬೇರೆ ಇತರ ಕಾಮ್ಯಾರ್ಥದೊಳಗಿರ್ಪ ಭ್ರಾಂತರನೇನೆಂಬೆನಯ್ಯಾ ಗುಹೇಶ್ವರಾ.