ಕಾರಣವಿಲ್ಲ ಕಾರ್ಯವಿಲ್ಲ, ಏತಕ್ಕೆ ಭಕ್ತರಾದೆವಿಂಬಿರೊ?
ಐವರ ಬಾಯ ಎಂಜಲನುಂಬಿರಿ,
ಐವರು ಸ್ತ್ರೀಯರ ಮುಖವನರಿಯಿರಿ.
ಮೂರು ಸಂಕಲೆಯ ಕಳೆಯಲರಿಯಿರಿ.
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ,
ಭ್ರಮೆಯ ನೋಡಾ ಗುಹೇಶ್ವರಾ.
Transliteration Kāraṇavilla kāryavilla, ētakke bhaktarādevimbiro?
Aivara bāya en̄jalanumbiri,
aivaru strīyara mukhavanariyiri.
Mūru saṅkaleya kaḷeyalariyiri.
Kāyaviḍidu liṅgava muṭṭihenemba,
bhrameya nōḍā guhēśvarā.
Hindi Translation कारण नहीं, कार्य नहीं, क्यों भक्त बन गये?
पाँचों के मुख का जूठन खाते हैं।
पाँच स्त्रियों के मुख जान लो।
तीन शृंखलों को दूरकरना जान लो।
शरीर धारणकर लिंग को जान लिया है
यह भ्रम देखो गुहेश्वरा।
Translated by: Eswara Sharma M and Govindarao B N
Tamil Translation காரணமில்லை, காரியமில்லை எதற்கு பக்தர் என்பீர்?
ஐவரின் வாயின் உமிழ்நீரைப் பருகுவீர்
ஐந்து மகளிரின் முகத்தை அறியீர்,
மூன்று பிணைப்புக்களை அகற்றலறியீர்,
உடல்பற்றைவிடாது, ஞானமடைந்தேன் என்று
கூறும் மருளைக் காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಐವರು = ಪಂಚ ಇಂದ್ರಿಯಗಳು; ಐವರು ಸ್ತ್ರೀಯರು = ಭಕ್ತನ ನಡೆಯನ್ನಲಂಕರಿಸುವ ಪಂಚಶೀಲಗಳು, ಪಂಚ ಆಚಾರಗಳು; ಕಾಯವಿಡಿದು = ಜಡದೇಹದ ಅಭಿಮಾನ ಹಿಡಿದು; ಮುಖ = ಆ ಆಚಾರಗಳ ಸ್ವರೂಪ; ಲಿಂಗವ ಮುಟ್ಟಿ = ಲಿಂಗದ ಸಾಮರಸ್ಯಾನುಭೂತಿಯನ್ನು ಪಡೆದು;
Written by: Sri Siddeswara Swamiji, Vijayapura