•  
  •  
  •  
  •  
Index   ವಚನ - 117    Search  
 
ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ. ಲಿಂಗಕ್ಕೆ ನೇಮವಿಲ್ಲ. ಇರುಳಿಗೊಂದು ನೇಮ, ಲಿಂಗಕ್ಕೆ ನೇಮವಿಲ್ಲ. ಹಸಿವಿಗೊಂದು ನೇಮ, ತೃಷೆಗೊಂದು ನೇಮ, ಲಿಂಗಕ್ಕೆ ನೇಮವಿಲ್ಲ. ಕಾಯಕ್ಕೊಂದು ನೇಮ, ಕರಣಕ್ಕೊಂದು ನೇಮ, ಲಿಂಗಕ್ಕೆ ನೇಮವಿಲ್ಲ. ನೇಮವಿಡಿದುದೆಲ್ಲ ಕಾಯದ ಕಳವಳ, ಕಾಯ ಒಂದು ದೆಸೆ, ಜೀವ ಒಂದು ದೆಸೆ, ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ.
Transliteration Udayavāyitta kaṇḍu udarakke kudivarayyā kattaleyāyitta kaṇḍu majjanakkerevarayyā. Liṅgakke nēmavilla. Iruḷigondu nēma, liṅgakke nēmavilla. Hasivigondu nēma, tr̥ṣegondu nēma, liṅgakke nēmavilla. Kāyakkondu nēma, karaṇakkondu nēma, liṅgakke nēmavilla. Nēmaviḍidudella kāyada kaḷavaḷa, kāya ondu dese, jīva ondu dese, guhēśvaranemba liṅga tānondu dese.
Hindi Translation उदय हुआ जानकर उदर का श्रम करते हैं। रात हुई समझकर लिंग का मज्जन करते हैं। लिंग को नियम नहीं; रात को एक नियम, दिन को एक नियम ! लिंग को नियम नहीं; शरीर एक तरफ, जीव एक तरफ, गुहेश्वर लिंगऔर एक तरफ। Translated by: Eswara Sharma M and Govindarao B N
Tamil Translation உதயத்தைக் கண்டு வயிற்றுப்பாடிற்கு கொதிப்பரையனே இருள்மண்டியதைக் கண்டு திருமஞ்சனம் செய்வரையனே இலிங்கத்திற்கு நியமமில்லை இருளிற்கு ஒரு நியமம், பகலிற்கு ஒரு நியமம்! இலிங்கத்திற்கு நியமமில்லை உடலொரு பக்கம், ஜீவன் ஒரு பக்கம் குஹேசுவரனெனும்லிங்கமும் வேறொரு பக்கம் Translated by: Smt. Kalyani Venkataraman, Chennai
ಶಬ್ದಾರ್ಥಗಳು ನೇಮ = ಧಾರ್ಮಿಕ ಆಚರಣೆ, ವ್ರತ; ವಿಧಿ-ವಿಧಾನಯುಕ್ತ ಪೂಜೆ, ಕಟ್ಟುಪಾಡು; Written by: Sri Siddeswara Swamiji, Vijayapura