•  
  •  
  •  
  •  
Index   ವಚನ - 1260    Search  
 
ಧರೆಯಾಕಾಶ ತಾರಾಮಂಡಲ ಸಪ್ತಸಮುದ್ರಂಗಳಿಲ್ಲದಂದು, ಒಂದು ಮಹಾವೃಕ್ಷವಿದ್ದಿತ್ತಯ್ಯಾ. ಆ ವೃಕ್ಷವ ಕಂಡು ನಾನು `ಓಂ ನಮಃ ಶಿವಾಯ' ಎನುತಿದ್ದೆನು. ಆ ವೃಕ್ಷದಿಂದ ಷಡುಸಾದಾಖ್ಯಂಗಳು ಪುಟ್ಟಿದವು. ಆ ಷಡುಸಾದಾಖ್ಯಂಗಳ ನೆಳಲಲ್ಲಿ ಕುಳ್ಳಿರ್ದು ನಾನು ಬಸವಾ ಬಸವಾ ಬಸವಾ ಎನುತಿರ್ದೆನು ಕಾಣಾ ಗುಹೇಶ್ವರಾ.
Transliteration Dhareyākāśa tārāmaṇḍala saptasamudraṅgaḷilladandu, ondu mahāvr̥kṣaviddittayyā. Ā vr̥kṣava kaṇḍu nānu `ōṁ namaḥ śivāya' enutiddenu. Ā vr̥kṣadinda ṣaḍusādākhyaṅgaḷu puṭṭidavu. Ā ṣaḍusādākhyaṅgaḷa neḷalalli kuḷḷirdu nānu basavā basavā basavā enutirdenu kāṇā guhēśvarā.
Hindi Translation धरती आकाश तारामंडल सप्त समुद्र न रहते समय, एक महावृक्ष रहा था अय्या। उस वृक्ष को देखकर मैं 'ॐनमःशिवाय’ – कह रहा था। उस वृक्ष से षडु सादाख्य जनमें, उन षडु सादाखयों की छाया में बैठे मैं बसवा बसवा बसवा कह रहा था देख गुहेश्वरा। Translated by: Eswara Sharma M and Govindarao B N