Index   ವಚನ - 1303    Search  
 
ನೀರಲೊಗೆದ ಮರಕ್ಕೆ ಕಾಣಬಾರದ ನೆಳಲು! ಬೀಜವಿಲ್ಲದ ಮರನ ಹೆಸರೇನೆಲವೊ? ಇದನೇನ ಬಲ್ಲಿರಿ? ಇದನೇನ ಬಲ್ಲಿರಿ? ಅರಿವಿನ ಮರೆಯ ಘನಕ್ಕೆ ಘನವಾದುದ! ಕಾಸಲಿಲ್ಲದ ತುಪ್ಪ, ವಾಸನೆಯಿಲ್ಲದ ಪರಿಮಳ! ಗುಹೇಶ್ವರನಿಪ್ಪ ನಿರಾಳವ ನೋಡಯ್ಯಾ.