ವಚನ - 1313     
 
ನೆಲನಿಲ್ಲದ ಠಾವಿನಲ್ಲಿ ಬೀಜವಿಲ್ಲದ ಮರ ಹುಟ್ಟಿತ್ತು. ಅದು ಹೂವಿಲ್ಲದೆ ಕಾಯಾಯಿತ್ತು, ಕಾಯಿಲ್ಲದೆ ಹಣ್ಣಾಯಿತ್ತು. ಹಣ್ಣಿಲ್ಲದ ಸವಿರುಚಿಯ ಅಲ್ಲಮನುಂಡು ತೃಪ್ತಿಯಾದ ಗುಹೇಶ್ವರನಲ್ಲಿ!