ವಚನ - 1338     
 
ಪೂಜೆಯಾಯಿತ್ತದೇನೊ? ಪೂಜೆಯ ಮೇಲೆ ಸಿಂಹಾಸನವಿದೇನೊ? ಧೂಪ ದೀಪ ನಿವಾಳಿ ಇದೇನೊ? ತಳದಲ್ಲಿ ಜ್ಯೋತಿ ಮೇಲೆ ಪ್ರಣತೆ! ಕಳಸದ ಮೇಲಣ ನೆಲಗಟ್ಟು ಕಂಡು ನೋಡಿ ಬೆರಗಾದೆ ಗುಹೇಶ್ವರಾ!