ಪೃಥ್ವಿಯ ಪಾಷಾಣ ಪೃಥ್ವಿಯ ಮೇಲೆ
ಬಿದ್ದು ಹೋದಡೆ
ಪ್ರಾಣಲಿಂಗ ಹೋಯಿತ್ತು,
ಪ್ರಾಣಲಿಂಗ ಹೋಯಿತ್ತು ಎಂಬಿರಿ.
ಪ್ರಾಣಲಿಂಗ ಹೋದಡೆ ನೀವು ನುಡಿವ ಪರಿಯೆಂತು?
ಅಂತರಂಗದಿ ಪ್ರಾಣಲಿಂಗಸಂಬಂಧದ
ಸುದ್ದಿಯನರಿಯರಾಗಿ,
ಗುಹೇಶ್ವರಾ, ನೀ ಮಾಡಿದ ಬೆಡಗು ಬಿನ್ನಾಣಕ್ಕೆ
ನಾನು ಬೆರಗಾದೆನು!
Transliteration Pr̥thviya pāṣāṇa pr̥thviya mēle
biddu hōdaḍe
prāṇaliṅga hōyittu,
prāṇaliṅga hōyittu embiri.
Prāṇaliṅga hōdaḍe nīvu nuḍiva pariyentu?
Antaraṅgadi prāṇaliṅgasambandhada
suddiyanariyarāgi,
guhēśvarā, nī māḍida beḍagu binnāṇakke
nānu beragādenu!
Hindi Translation पृथ्वी का पाषाण पृथ्वि पर गिर जाये तो
प्रणलिंग गया था, प्राणलिंग गया था कहेंगे।
प्रणलिंग गये तो तुम बोलने की रीति कैसी?
अंतरंग में प्राणलिंग संबंध का विषय न जानने से,
गुहेश्वरा, तू किये नखरे से मैं चकित हुआ !
Translated by: Eswara Sharma M and Govindarao B N