ವಚನ - 1344     
 
ಪೃಥ್ವಿ ಹೊರುತ್ತಲಿದೆ, ಅಪ್ಪು ಉಲಿವುತ್ತಲಿದೆ, ತೇಜ ಉರಿವುತ್ತಲಿದೆ, ವಾಯು ಹರಿಯುತ್ತಲಿದೆ, ಆಕಾಶವಿಂಬುಗೊಡುತ್ತಲಿದೆ. ಅಗಣಿತವಪ್ರಮಾಣವಾನಂದ ಗುಹೇಶ್ವರ!