•  
  •  
  •  
  •  
Index   ವಚನ - 135    Search  
 
ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು. ಲಿಂಗಭಕ್ತನ ಇಂಬಾವುದೆಂದರಿಯರು. ಲಿಂಗಭಕ್ತ ಹಮ್ಮುಬಿಮ್ಮಿನವನೆ? ಲಿಂಗಭಕ್ತ ಸೀಮೆಯಾದವನೆ? ಪ್ರಾಣವಿಲ್ಲದ ರೂಹು, ಒಡಲಿಲ್ಲದ ಜಂಗಮ, ಉಳಿದುವೆಲ್ಲಾ `ಸಟೆ' ಎಂಬೆನು ಗುಹೇಶ್ವರಾ.
Transliteration Liṅgabhaktanendu jagavellā sāruttipparu. Liṅgabhaktana imbāvudendariyaru. Liṅgabhakta ham'mubim'minavane? Liṅgabhakta sīmeyādavane? Prāṇavillada rūhu, oḍalillada jaṅgama, uḷiduvellā `saṭe' embenu guhēśvarā.
Hindi Translation लिंग भक्त कहते सारी दुनिया ढिंढोरा पीटती है। लिंग भक्त की स्थिति क्या यह नहीं जानते। क्या लिंग भक्त अहंकार ममकार से जुड़ा है ? क्या लिंग भक्त किसी सीमा से बँधा है ? बिना प्राणरूप, बिना शरीर जंगम; बचे सब झूठ कहता हूँ गुहेश्वरा। Translated by: Eswara Sharma M and Govindarao B N
Tamil Translation உலகிலுள்ளோர் இலிங்கபக்தரென பறைசாற்றுவர், இலிங்க பக்தனின் சொரூபம் என்னவென்றறியார், இலிங்கபக்தனிடம் “நான்” “எனது” எனும் உணர்வு உண்டோ? இலிங்கபக்தனிடம் மேல், கீழ் எனும் எல்லை உண்டோ? பிராணனற்ற வடிவம், உடலற்ற ஜங்கமன் எஞ்சியவை கீழானது என்பேன் குஹேசுவரனே! Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಂಬು = ಸ್ಥಿತಿ, ಸ್ವರೂಪ, ಇರುವಿಕೆ; ಒಡಲು = ದೇಹ, ದೇಹದ ಅಭಿಮಾನ; ಜಗವೆಲ್ಲ = ಜಗತ್ತಿನ ಜನರೆಲ್ಲ; ಪ್ರಾಣವಿಲ್ಲದ = ಪ್ರಾಣವಿಕಾರಗಳಿಲ್ಲದ; ಬಿಮ್ಮು = ದರ್ಪ, ಮಮಭಾವ; ರೂಪು = ನಿಲವು; ಸಟೆ = ಸುಳ್ಳು, ಅಮುಖ್ಯ, ಗೌಣ; ಸೀಮೆ = ಮನಷ್ಯನ ದೇಹ ಮತ್ತು ಸುತ್ತಲಿನ ಸಮಾಜ; ಇವುಗಳನ್ನು ಆಧರಿಸಿ ಉಂಟಾಗುವ ಭಾವಮಿತಿ; ಲಿಂಗ, ಜಾತಿ, ವರ್ಗ ಮುಂತಾದವು; ಹಮ್ಮು = ಅಹಂಕಾರ, ಅಹಂಭಾವ; Written by: Sri Siddeswara Swamiji, Vijayapura