ವಚನ - 1361     
 
ಬಯಕೆ ಎಂಬುದು ದೂರದ ಕೂಟ, `ಬಯಸೆ' ಎಂಬುದು ಕೂಟದ ಸಂದು. ಈ ಉಭಯವೂ ಕಪಟ ಕನ್ನಡವಲ್ಲದೆ ಸಹಜವಲ್ಲ. ಕೂಡಿ ಕಂಡ ಪರಿಯೆಂತು ಹೇಳಾ ಇನ್ನು ಲಿಂಗೈಕ್ಯವನು? ಕೂಪ ಠಾವಿನಲ್ಲಿ ಪರವಶವಾದೆನೆಂಬ ಮಾತ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗ?