ವಚನ - 1370     
 
ಬಸವಣ್ಣನ ಉಂಗುಷ್ಟದಲ್ಲಿ, ಅಷ್ಟಾಷಷ್ಟಿ ತೀರ್ಥಂಗಳ ಉದಕವ ಮೀರಿದ ಮಹಾತೀರ್ಥದೊಟ್ಟಿಲ ಕಂಡೆನಯ್ಯಾ! ಬಸವಣ್ಣನ ಆಧಾರ ಲಿಂಗ ನಾಭಿ ಪರಿಯಂತರವು ಗುರುಸ್ವರೂಪದೊಟ್ಟಿಲ ಕಂಡೆನಯ್ಯಾ. ಬಸವಣ್ಣನ ನಾಭಿ ಹೃದಯ ಪರಿಯಂತರವು ಲಿಂಗಸ್ವರೂಪದೊಟ್ಟಿಲ ಕಂಡೆನಯ್ಯಾ. ಬಸವಣ್ಣನಗಳ ಮುಖ ಭ್ರೂಮಧ್ಯ ಉನ್ಮನಿ ಉತ್ತಮಾಂಗ ಪರಿಯಂತರವು ಜಂಗಮಸ್ವರೂಪದೊಟ್ಟಿಲ ಕಂಡೆನಯ್ಯಾ. ಬಸವಣ್ಣನ ವಿಶ್ವತೋಮುಖವನುಳ್ಳ ಶರೀರದೊಳಗೆ, ಈ ಪರಿಯ ಕಂಡಾತನೆ ಭಕ್ತ, ಜಂಗಮವೆಂಬೆನು ಕಾಣಾ ಗುಹೇಶ್ವರಾ.