•  
  •  
  •  
  •  
Index   ವಚನ - 1392    Search  
 
ಭಕ್ತನಾಧೀನವಾಗಿ ಭಕ್ತಿಯ ಬೇಡ ಬಂದವನಲ್ಲ. ಮುಕ್ತಿಯಾಧೀನವಾಗಿ ಮುಕ್ತಿಯ ಬೇಡ ಬಂದವನಲ್ಲ. ಅಶನಾತುರನಾಗಿ ವಿಷಯವ ಬಯಸಿ ಬಂದವನಲ್ಲ. ಗುಹೇಶ್ವರನ ಶರಣ ಸಂಗನಬಸವಣ್ಣ ಮಾಡುವ ಭಕ್ತನಲ್ಲಾಗಿ, ನಾನು ಬೇಡುವ ಜಂಗಮವಲ್ಲ, ಕಾಣಾ, ಚೆನ್ನಬಸವಣ್ಣಾ.
Transliteration Bhaktanādhīnavāgi bhaktiya bēḍa bandavanalla. Muktiyādhīnavāgi muktiya bēḍa bandavanalla. Aśanāturanāgi viṣayava bayasi bandavanalla. Guhēśvarana śaraṇa saṅganabasavaṇṇa māḍuva bhaktanallāgi, nānu bēḍuva jaṅgamavalla, kāṇā, cennabasavaṇṇā.
Hindi Translation भक्त का अधीन होकर भक्ति माँगने नहीं आया, मुक्ति का अधीन होकर मुक्ति माँगने नहीं आया। भोजन की आशा से विषय चाहकर नहीं आया। गुहेश्वर शरण संगनबसवण्णा न करनेवाला भक्तहोने से, मैं माँगनेवाला जंगम नहीं, देख चेन्नबसवण्णा। Translated by: Eswara Sharma M and Govindarao B N