Index   ವಚನ - 1395    Search  
 
ಭಕ್ತ, ಪ್ರಸಾದವ ಕೊಂಡು ಪ್ರಸಾದವಾದ. ಪ್ರಸಾದ, ಭಕ್ತನ ನುಂಗಿ ಭಕ್ತನಾಯಿತ್ತು. ಭಕ್ತನೂ ಪ್ರಸಾದವೂ ಏಕಾರ್ಥವಾಗಿ-ಲಿಂಗಸಂಗವ ಮರೆದು, ಭಕ್ತನೆ ಭವಿಯಾದ, ಪ್ರಸಾದವೆ ಓಗರವಾಯಿತ್ತು. ಮತ್ತೆ ಆ ಓಗರವೆ ಭವಿ, ಭವಿಯೆ ಓಗರವಾಯಿತ್ತು. ಓಗರ ಭವಿ ಎಂಬೆರಡೂ ಇಲ್ಲದೆ ಓಗರವೆ ಆಯಿತ್ತು ಗುಹೇಶ್ವರಾ.