•  
  •  
  •  
  •  
Index   ವಚನ - 141    Search  
 
ಅಕ್ಕಟಾ ಜೀವನ ತ್ರಿವಿಧವೆ, ಮೂರಕ್ಕೆ ಮುಟ್ಟದೆ ಹೋದೆಯಲ್ಲಾ! ಬಿಂದುವಿನ ಕೊಡನ ಹೊತ್ತುಕೊಂಡು, ಅಂದಚಂದಗೆಟ್ಟು ಆಡುವರಯ್ಯಾ! ಗುಹೇಶ್ವರ ನಿರಾಳವೆ, ಐದರಿಂದ ಕೆಟ್ಟಿತ್ತು ಮೂರು ಲೋಕ.
Transliteration Akkaṭā jīvana trividhave, mūrakke muṭṭade hōdeyallā! Binduvina koḍana hottukoṇḍu, andacandageṭṭu āḍuvarayyā! Guhēśvara nirāḷave, aidarinda keṭṭittu mūru lōka.
Hindi Translation अय्या, जीवन त्रिविध, तीन रूपों को नहीं पहुंच सके। माया शरीर धारण करके मनमाने श्रृंगारकर खेल रहे हैं। निर्मल गुहेश्वरा तीन लोक पाँचोंसे बिगड़ा था। Translated by: Eswara Sharma M and Govindarao B N
Tamil Translation அடடா, ஜீவனுக்கு மூன்று வடிவங்களா மூல சொரூபத்தை அடையாமல் சென்றாயன்றோ! பிந்துவின் குடத்தைச் சுமந்து கொண்டு அழகு சிதைந்து ஆடுவர் ஐயனே குஹேசுவரன் அமைதி, தூய்மை வடிவினன் ஐம்புலனின்பங்களால் மூவுலகும் கெட்டதன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಐದರಿಂದ ಕೆಟ್ಟಿತ್ತು = ಶಬ್ದ, ಸ್ಪರ್ಶಾದಿ ಪಂಚವಿಷಯವ್ಯಾಮೋಹದಿಂದ ಹಾಳಾಯಿತ್ತು; ಜೀವನ ತ್ರಿವಿಧವೆ = ತ್ರಿವಿಧರೂಪನಾದ ಜೀವನು; ನಿರಾಳ = ಪ್ರಶಾಂತ, ಅತ್ಯಂತ ನಿರ್ಮಲ; ಬಿಂದು = ಮಾಯೆ; ವೈವಿದ್ಯಪೂರ್ಣವಾದ ವಿಶ್ವದ ಮೂಲಕಾರಣವು ಬಿಂದು ಆಗಿರುವುದರಿಂದ ಅದಕ್ಕೆ ಬಿಂದು ಎನ್ನವುದು ಸಾಂಕೇತಿಕ ಹೆಸರು; ಬಿಂದುವಿನ ಕೊಡ = ಮಾಯಾ ನಿರ್ಮಿತವಾದ ದೇಹ; Written by: Sri Siddeswara Swamiji, Vijayapura