ವಚನ - 1453     
 
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲರಿಯರು! ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಲರಿಯರು! ಐದರ ಮುಸುಕ ತೆಗೆದು ಐದರ ಕಳೆಯ ಕೆಡಿಸಿ, ಐದರ ನಿಲವನಡಗಿಸಿ ಮೂರು ಸಂಕಲೆಯ ಕಳೆದು ಮೂರರ ಮುದ್ರೆಯನೊಡೆದು ಒಂದು ಮುಖವಾಗಿ ನಿಂದಲ್ಲದೆ ಜಂಗಮವಾಗಲರಿಯರು ಕಾಣಾ ಗುಹೇಶ್ವರಾ.