•  
  •  
  •  
  •  
Index   ವಚನ - 149    Search  
 
ಉರಿಗೆ ಉರಿಯನೆ ತೋರುವೆನು, ಅಮೃತದ ಕಳೆಯಲ್ಲಿ ನಿಲಿಸುವೆನು. ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ- ನಿರಂತರವಾಗಿರ್ದೆನಯ್ಯಾ.
Transliteration Urige uriyane tōruvenu, amr̥tada kaḷeyalli nilisuvenu. Nānu brahmasthānadalli guhēśvarā- nirantaravāgirdenayyā.
Hindi Translation आग को आग दिखाऊँगा। अमृत प्रकाश में खड़ाकरूँगा। मैं ब्रह्मस्थान में निरंतर रहूँगा गुहेश्वरा । Translated by: Eswara Sharma M and Govindarao B N
Tamil Translation வெப்பத்திற்கு வெப்பத்தையே காட்டுவேன், அமுதத்தை விளக்கினில் நிறுத்துவேன், நான் பிரம்ம உணர்வு அரும்பிய நிலையில் எப்பொழுதும் உள்ளேன் ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಮೃತ = ಇದು ಶಾಂತಿಯ ದ್ಯೋತಕ; ಅಮೃತದ ಕಳೆ = ಶಾಂತಿ ಸ್ವರೂಪವಾದ ಶಿವಬೆಳಗು; ಉರಿ = ಸಾಂಸಾರಿಕತಾಪ, ವಿಷಯಗಳ ಚಿಂತೆಯಿಂದ ಉಂಟಾಗುವ ಬೇಗೆ; ಉರಿಯನೆ ತೋರು = ಸುಟ್ಟುಹಾಕು, ನಷ್ಟಗೊಳಿಸು, ಅಡಗಿಸಿಬಿಡು; ಕಳೆ = ಬೆಳಗು; ಬ್ರಹ್ಮಸ್ಥಾನ = ಬ್ರಹ್ಮನ ಭಾವ ಬರುವ ಸ್ಥಾನ; Written by: Sri Siddeswara Swamiji, Vijayapura