•  
  •  
  •  
  •  
Index   ವಚನ - 15    Search  
 
ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು. ಒಂದು ಗಿಳಿ ಇಪ್ಪತ್ತೈದು ಗಿಳಿಯಾಯಿತ್ತು. ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆ ಕೂಳಾದ, ರುದ್ರನಾ ಗಿಳಿಗೆ ತಾ ಕೋಲಾದ. ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತು-ಇದೆಂತೊ ಗುಹೇಶ್ವರಾ?
Transliteration Gaganada mēlondu abhinava giḷi huṭṭi saya sambhramadalli maneya māḍittu. Brahmanā giḷige han̄jaravāda, viṣṇu ā giḷige kore kūḷāda, rudranā giḷige tā kōlāda. Intī mūvara mundaṇa kandana nuṅgi dr̥ṣṭanāma naṣṭavāyittu-idento guhēśvarā?
English Translation 2 On heaven's expanse A strange parrot was born, And she built her a house In vainglorious pomp. But of that one parrot There were born five and twenty. Brahma was the parrot's cage, Visņu her victuals, And Rudra her perch. When she swallowed a young one In front of those Three, Behold O Guheśvara, The visible ceases to be!
Hindi Translation गगन पर एक अभिनव शुक जन्म लेकर सरल संभ्रम में घर बना लिया। एक शुक से पच्चीस हुए । ब्रह्म उस शुक का पिंजड़ा बना, विष्णु उस शुक का आहार बना, रुद्र उस शुक में बंधित हुआ । इन तीनों के आगे के बच्चे को निगलकर दृष्ट नाम नाश हुआ ; यह कैसे गुहेश्वरा ? Translated by: Eswara Sharma M and Govindarao B N
Tamil Translation ஆகாயத்தில் ஒரு புதிய கிளி தோன்றி தனக்கென மகிழ்வுடன் ஒரு வீட்டைக்கட்டியது. ஒரு கிளி இருபத்தைந்து கிளிகளாயின. பிரம்மன் அக்கிளிக்குக் கூடாயினன். விஷ்ணு அக்கிளிக்கு உணவாயினன். உருத்திரன் அக்கிளியைப் பிணைப்புறச் செய்தனன் இவ்விதத்தில் மூவருக்கும் முன்பே கிளியை விழுங்கியதால் மூல சொரூபம் அழிந்தது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಭಿನವ = ನೂತನ. ಮೂಲವಸ್ತುವಾದ ಮಹಾಲಿಂಗದಿಂದ ಭಿನ್ನವಾದಂತೆ ತೋರುವುದು, ಸೃಷ್ಟಿಯ ಪ್ರಾರಂಭದಲ್ಲಿ ಕಾಣಬಂದಂತಹುದು, ನಿತ್ಯನೂತನವೆನ; ಕೋಳುವೋದ = ಬಂಧಿತನಾದ; ಗಗನ = ತತ್ವ್ತ-ವಿತತ್ತ್ವಗಳು ಕಾಣಬರದ ಮುಂಚಿನ ಬಯಲು. ಅದು ಪರಶಿವ; ಗಿಳಿ = ಜೀವ ಪಕ್ಷಿ, ಇಪ್ಪತ್ತೈದು ತತ್ವ್ತಗಳ ಅಭಿಮಾನ ತಾಳಿತು; ತತ್ವ್ತಗಳು ಎಂದರೆ ಮೂ = ಪಂಚ ಸಾದಾಖ್ಯಗಳು, ಪಂಚಕಲೆಗಳು; ; ದೃಷ್ಟನಾಮ ನಷ್ಟವಾಯಿತ = ನಿಜಸ್ವರೂಪವು ಮರೆಯಾಯಿತು; ಬ್ರಹ್ಮ = ಸ್ಥೂಲದೇಹ, ಭೂತಗಳಿಂದ ನಿರ್ಮಾಣಗೊಂಡ ತನು; ಮೂವರ ಮುಂದಿನ ಕಂದ = ಈ ಮೂರು ದೇಹಗಳು ತೋರಿಬರುವ ಮುಂಚೆಯೇ ಕಾಣಬಂದ ಅಭಿನವ ಜೀವಗಿಳಿ; ರುದ್ರ = ಕಾರಣ ತನು, ತಮಂಧದ ವಿಸ್ತಾರ; ವಿತತ್ವ್ತಗಳು ಎಂದರೆ = ಆ ತತ್ವ್ತಗಳ ವಿಶಿಷ್ಟ ಮಿಶ್ರಣದಿಂದ ಕಾಣಬರುವ ತತ್ವ್ತಗಳು; ವಿಷ್ಣು = ಸೂಕ್ಷ್ಮದೇಹ, ವಿಷಯವಾಸನೆಗಳ ಕಣಜ; Written by: Sri Siddeswara Swamiji, Vijayapura