•  
  •  
  •  
  •  
Index   ವಚನ - 151    Search  
 
ಅನಲನಾರಣ್ಯದೊಳಗೆ ಎದ್ದಲ್ಲಿ; ದೂರದೆಡೆಯಲಾರನೂ ಕಾಣೆವು, ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ! ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ [ಅ]ಟ್ಟಳೆ. ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ, ಸರ್ವವೂ ಸಾಧ್ಯವಾಯಿತ್ತು.
Transliteration Analanāraṇyadoḷage eddalli; dūradeḍeyalāranū kāṇevu, saṅgrāmadhīrarellarū nelegeṭṭarāgi! Māyāman̄jina kōṭege, ran̄janeya kottaḷa, an̄janeya [a]ṭṭaḷe. Guhēśvaranu śaraṇa aikyasthalava meṭṭaloḍane, sarvavū sādhyavāyittu.
Hindi Translation अनल जंगल में जल उठे तो सामने रुकनेवाला कोई नहीं दीखता; संग्राम धीर सभी डर गये ! माया भ्रम किले को प्रसन्न का बुर्ज, दिग्गजों की रक्षा। गुहेश्वर का शरण ऐक्यस्थल पहुंचने में सर्वसाध्य हुआ ! Translated by: Eswara Sharma M and Govindarao B N
Tamil Translation காட்டுத்தீ படர்ந்த பொழுது, மரத்தின் இடையில் யாரையும் காணேன். போர்வீரர்கள் அனைவரும் நிலைகுலைந்தனர்! மாயமஞ்சுவின் கோட்டையிலே உற்சாக ஆரவார கொத்தளம் யானைக்காவல் குஹேசுவரனின் சரணன் ஐக்கியத் தலத்தையடைந்ததும் அனைத்தும் இயன்றது ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಜನೆ = ದಿಗ್ಗಜ; ಅನಲ = ಸಂಸಾರದ ಉರಿ; ಅರಣ್ಯ = ಭವಾರಣ್ಯ; ಐಕ್ಯಸ್ಥಲವ ಮೆಟ್ಟುವು = ಐಕ್ಯಸ್ಥಲದ ಪಥವ ಮೆಟ್ಟುವುದು; ಕಟ್ಟಳೆ = ಕಾವಲು, ರಕ್ಷಣೆ; ಮಾಯಾಮಂಜು = ದೃಷ್ಟಿಯನ್ನು, ಮನಸ್ಸನ್ನು ಆವರಿಸುವ ಭ್ರಮೆ; ಅದುವೆ ಕೋಟೆ; ರಂಜನೆ = ಮಾಯಾವಿಲಾಸ, ಭೋಗ ವೈಭವಗಳ ಲಾಲಸೆ; ಅದುವೆ ಕೊತ್ತಳ(ಬುರುಜು); Written by: Sri Siddeswara Swamiji, Vijayapura