ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು ನಿಟ್ಟೆಲುವ ಮುರಿದು
ನಿಷ್ಠೆಯಿಂದ ಹಿಂದಣ ಬಟ್ಟೆಯ ತೆಗೆದು,
ಅಮೃತವ ಉಂಡಿಹೆನೆಂಬವರು ಕೆಟ್ಟ ಕೇಡಿಂಗೆ ಕಡೆಯಿಲ್ಲ.
`ಅತ್ಯತಿಷ್ಟದ್ದಶಾಂಗುಲ' ಎಂಬ ಶ್ರುತಿಯ ನೋಡಲು
ಮುಟ್ಟಿ ನೆಲೆಗೊಳಿಸುವ ಠಾವುಂಟೆ?
ಸ್ಥಾನಮಾನವೆಂಬ ಮಾತಿಂಗೆ ದೂರವಾದ ಘನವ
ಬ್ರಹ್ಮರಂಧ್ರದಲ್ಲಿ ಕಂಡಿಹೆನೆಂದಡೆ ಕಾಣಬಹುದೆ?
ನಮ್ಮ ಗುಹೇಶ್ವರಲಿಂಗವು
ಕಲ್ಪಿತಕ್ಕೆ ದೂರ ಕೇಳಾ ಸಿದ್ಧರಾಮಯ್ಯಾ.
Transliteration Svastha padmāsanadalli kuḷḷirdu niṭṭeluva muridu
niṣṭheyinda hindaṇa baṭṭeya tegedu,
amr̥tava uṇḍ'̔ihenembavaru keṭṭa kēḍiṅge kaḍeyilla.
`Atyatiṣṭaddaśāṅgula' emba śrutiya nōḍalu
muṭṭi nelegoḷisuva ṭhāvuṇṭe?
Sthānamānavemba mātiṅge dūravāda ghanava
brahmarandhradalli kaṇḍ'̔ihenendaḍe kāṇabahude?
Nam'ma guhēśvaraliṅgavu
kalpitakke dūra kēḷā sid'dharāmayyā.
Hindi Translation स्वस्थ पद्मासन में बैठकर रीड की हड्डी तोडे
निष्टा से पहले के कपडे निकाले,
अमृत खायेकहने वाले बिगडे नाश का अंत्य नहीं।
“अत्यतिष्ट्दशांगुल”-कहना शृति देखे तो
छूकर स्थिर करने काठाँव है क्या?
स्थान मान जैसे बोली से दूर हुआ घन
ब्रह्मरंध्र में देखा कहे तो देख सकते?
हमारा गुहेश्वर लिंग
कल्पना से दूर सुन सिद्धरामय्या।
Translated by: Eswara Sharma M and Govindarao B N