ಸ್ವಾನುಭಾವದ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು.
ಆ ಬೆಕ್ಕಿನ ತಲೆಯ ಮೇಲೊಂದು ಗಿರಿ ಹುಟ್ಟಿತ್ತು.
ಗಿರಿಯ ಮೇಲೆರಡು ರತ್ನ ಹುಟ್ಟಿದವು.
ಆ ರತ್ನಂಗಳನರಸಿಕೊಂಡು ಬರಲು,
ಅವು ತನ್ನನವಗ್ರಹಿಸಿದವು.
ಒಂದು ರತ್ನ ಅಂಗವನವಗ್ರಹಿಸಿತ್ತು,
ಮತ್ತೊಂದು ರತ್ನ ಪ್ರಾಣವನವಗ್ರಹಿಸಿತ್ತು.
ಆ ರತ್ನಂಗಳ ಪ್ರಭೆ ತಾನಾದ
ನಮ್ಮ ಗುಹೇಶ್ವರನ ಶರಣ
ಸಿದ್ಧರಾಮಯ್ಯ ದೇವರ ನಿಲವಿಂಗೆ
ನಮೋ ನಮೋ ಎನುತಿರ್ದೆನಯ್ಯಾ
ಚೆನ್ನಬಸವಣ್ಣಾ.
Transliteration Svānubhāvada beḷaginalli ondu bekku huṭṭittu.
Ā bekkina taleya mēlondu giri huṭṭittu.
Giriya mēleraḍu ratna huṭṭidavu.
Ā ratnaṅgaḷanarasikoṇḍu baralu,
avu tannanavagrahisidavu.
Ondu ratna aṅgavanavagrahisittu,
mattondu ratna prāṇavanavagrahisittu.
Ā ratnaṅgaḷa prabhe tānāda
nam'ma guhēśvarana śaraṇa
sid'dharāmayya dēvara nilaviṅge
namō namō enutirdenayyā
cennabasavaṇṇā.
Hindi Translation स्वानुभाव के प्रकाश में एक बिल्ली पैदा हुई थी।
उस बिल्ली के सिर पर एक गिरि पैदा हुआ था।
गिरि पर दो रत्न पैदा हुए।
उन रत्नों को ढूँढते आये तो अपने को अपना लिया ।
एक रत्न ने अंग को अपनाया था।
और एक रत्न ने प्राण को अपनाया था।
उन रत्नों की प्रभा खुद बने हमारे गुहेश्वर का शरण
सिद्धरामय्या देव की स्थिति को
नमो नमो कह रहा हूँ चेन्नबसवण्णा।
Translated by: Eswara Sharma M and Govindarao B N