•  
  •  
  •  
  •  
Index   ವಚನ - 1601    Search  
 
ಹೂ ಮಿಡಿಯ ಹರಿದು ಒತ್ತಿ ಹಣ್ಣ ಮಾಡಿಹೆನೆಂದಡೆ ಹಣ್ಣಾಗಬಲ್ಲುದೆ? ಪರಿಮಳವಿಲ್ಲದ ನನೆಯನರಳಿಸಿ ಮುಡಿದಹೆನೆಂದಡೆ ಸೌರಭ ಉಂಟೆ? ಶಿವಶರಣರ ನಿಲವು ಕಾಂಬ ಕಾಲಕ್ಕೆ ಕಾಣಬಹುದಲ್ಲದೆ ಎಲ್ಲಾ ಹೊತ್ತು ಕಾಣಬಹುದೆ? ಅಹ ಕಾಲಕ್ಕೆ ತಾನೆ ಅಪ್ಪುದು. ಗುಹೇಶ್ವರನ ಶರಣರ ನಿಲವ ಕಂಡ ಬಳಿಕ ಮರಹು, ಬೆಳಗ ಕಂಡ ಕತ್ತಲೆಯಂತೆ ನೋಡ ನೋಡ ಹರೆವುದು ನೋಡಾ ಸಂಗನಬಸವಣ್ಣಾ.
Transliteration Hū miḍiya haridu otti haṇṇa māḍ'̔ihenendaḍe haṇṇāgaballude? Parimaḷavillada naneyanaraḷisi muḍidahenendaḍe saurabha uṇṭe? Śivaśaraṇara nilavu kāmba kālakke kāṇabahudallade ellā hottu kāṇabahude? Aha kālakke tāne appudu. Guhēśvarana śaraṇara nilava kaṇḍa baḷika marahu, beḷaga kaṇḍa kattaleyante nōḍa nōḍa harevudu nōḍā saṅganabasavaṇṇā.
Hindi Translation कच्चा फल तोडकर दबाये फल कर सके तो फल बन सकता ? बिना परिमल कलि को खिलाकर गूँथे कहें तो सौरभ है क्या ? शिवशरणों की स्थिति देखते समय देखने के बिना सदा सब समय में देख सकते ? उस उस काल को खुद होता है । गुहेश्वर के शरणॊं की स्थिति देखने के बाद भूल,प्रकाश देखे अंधकार जैसे देखते देखते फैलेगा देख संगनबसवण्णा । Translated by: Eswara Sharma M and Govindarao B N