ಮಾಡಿದ ಓಗರ ಮಾಡಿದಂತಿದ್ದಿತ್ತು,
ನೀಡಿದ ಕೈಗಳೆಡೆಯಾಡುತ್ತಿರ್ದವು.
ಲಿಂಗಕರ್ಪಿತವ ಮಾಡಿದೆವೆಂಬರು.
ಒಂದರಲೊಂದು ಸವೆಯದು ನೋಡಾ.
ಲಿಂಗವಾರೋಗಣೆಯ ಮಾಡಿದನೆಂಬರು,
ತಾವುಂಡು ನಿಮ್ಮ ದೂರುವರು ಗುಹೇಶ್ವರಾ.
Transliteration Māḍida ōgara māḍidantiddittu,
nīḍida kaigaḷeḍeyāḍuttirdavu.
Liṅgakarpitava māḍidevembaru.
Ondaralondu saveyadu nōḍā.
Liṅgavārōgaṇeya māḍidanembaru,
tāvuṇḍu nim'ma dūruvaru guhēśvarā.
Hindi Translation बनाया भोजन जैसे के तैसे है।
परोसनेवाले हाथ नैवेद्यकर रहे हैं।
लिंगार्पित किया कहते हैं,
एक में एक कम नहीं होता है देखो।
लिंगावरोगणा किया कहते हैं,
खुद खाकर तुम्हारी निंदा करते गुहेश्वरा।
Translated by: Eswara Sharma M and Govindarao B N
Tamil Translation படைத்த படையல் படைத்தனைய இருந்தது.
அளித்த கைகள் தென்பட்டன,
இலிங்கத்திற்கு அர்ப்பித்தோம் என்பர்,
ஒன்றினையொன்று அணுகாது காணாய்,
இலிங்கத்திற்குப் படைத்தோம் என்பர்.
தாம்உண்டு உம்மைத் தூற்றுவர் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರೋಗಣೆ = ಭಕ್ತಿ ಸಮರ್ಪಿತವಾದ ಪವಿತ್ರ ಭೋಜನ; ಆರೋಗಣೆಯ ಮಾಡು = ಅಂಥ ಭೋಜನವನ್ನು ಸ್ವೀಕರಿಸು; ಓಗರ = ಮೀಸಲು ಎಡೆ, ನೈವೇದ್ಯ; ಸತ್ಯಶುದ್ದಕಾಯಕದಿಂದ ತಂದು ಶುದ್ದಭಾವದಿಂದ ಪಾಕಗೊಳಿಸಿದ ಅನ್ನ;
Written by: Sri Siddeswara Swamiji, Vijayapura