•  
  •  
  •  
  •  
Index   ವಚನ - 168    Search  
 
ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ, ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ ಹೊರಳಿ ಹೋಗಬಾರದು! ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ, ಅರ್ಪಿತವ ಮಾಡಬಲ್ಲಡೆ, ಭಿನ್ನಭಾವವೆಲ್ಲಿಯದೊ ಗುಹೇಶ್ವರಾ?
Transliteration Sarvasuyidhāni endenisikoḷḷaballaḍe, banda kāma krōdhava liṅgakkarpitava māḍabēku. Alagina koneya moneya mēlaṇa sinhāsana horaḷi hōgabāradu! Śivācārada dhāre mēre muṭṭada munna, arpitava māḍaballaḍe, bhinnabhāvavelliyado guhēśvarā?
Hindi Translation सर्व प्रसादी कहने योग्य हो तो आये काम क्रोधादि को लिंगार्पित करना चाहिए। तलवार की नोक पर के सिंहासन से मुड़ कर न जाना चाहिए। शिवाचार की धारा सीमा पारकरने के पहले अर्पित कर सके तो भिन्न भाव कहाँ है गुहेश्वरा ? Translated by: Eswara Sharma M and Govindarao B N
Tamil Translation ஸர்வ பிரசாதியாக விளங்க வேண்டுமெனின் எழும் காமம், சினத்தை இலிங்கத்திற்கு அர்ப்பிக்க வேண்டும். சூட்சும மன ஆழத்தில் தென்படும் சிவஞானம் அடங்கி ஒடுங்குதல் கூடாது. சிவானுபவம் நிலைகொள்ளும் முன்னரே அர்ப்பிக்க இயலும் எனின் மாறுபட்ட உணர்வு வருவதில்லை குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲಗು = ಭಕ್ತಿಸಾಧನೆಯಿಂದ ಸೂಕ್ಷ್ಮಗೊಂಡ ಮನಸ್ಸು; ಕೊನೆಯ ಮೊನೆಯ ಮೇಲೆ = ಸೂಕ್ಷ್ಮ ಮನಸ್ಸಿನ ತುಟ್ಟತುದಿ; ಶಿವಾಚಾರದ ಧಾರೆ = ಶಿವಚಿಂತನೆ, ಶಿವಧ್ಯಾನ; ಸರ್ವ ಸುಯಿಧಾನಿ = ತನ್ನದು ಎನಿಸುವ ಎಲ್ಲವನ್ನೂ ದೇವನಲ್ಲಿ ಸಮರ್ಪಿಸುವವ, ಸರ್ವಪ್ರಸಾದಿ; ಸಿಂಹಾಸನ = ಶಿವಪದ. ಲಿಂಗಸ್ಥಳ, ಲಿಂಗಾಭಿವ್ಯಕ್ತಿಯ ನೆಲೆ; ಅದು ಶಿವಜ್ಞಾನ; ಹೊರಳಿಹೋಗಬಾರದು = ಅಡಗಬಾರದು; Written by: Sri Siddeswara Swamiji, Vijayapura