•  
  •  
  •  
  •  
Index   ವಚನ - 172    Search  
 
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು. ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು. ಗುಹೇಶ್ವರಾ ನಿಮ್ಮ ಶರಣರು, ಹಿಂದ ನೋಡಿ ಮುಂದನರ್ಪಿಸುವರು.
Transliteration Padavanarpisabahudallade, padārthavanarpisabāradu. Ōgaravanarpisabahudallade, prasādavanarpisabāradu. Guhēśvarā nim'ma śaraṇaru, hinda nōḍi mundanarpisuvaru.
Hindi Translation पदको अर्पणकर सकने के बदले, पदार्थ को अर्पण मत करना, आहार को अर्पणकर सकने के बदले, प्रसाद को अर्पण मत करना, गुहेश्वरा तुम्हारे शरण पीछे देख आगे अर्पण करते हैं। Translated by: Eswara Sharma M and Govindarao B N
Tamil Translation நான் எனும் உணர்வை அர்ப்பிக்கவியலுமன்றி பொருளை அர்ப்பிக்கவியலாது. படையலைப் படைக்கவியலுமன்றி பிராசத்தை அர்ப்பிக்கவியலாது. குஹேசுவரனே, உம் அடியார் உலகின் பின்னணியிலுள்ள சத்தியத்தைக் கண்டு நான், எனது எனும் உணர்வை அர்ப்பிப்பர். Translated by: Smt. Kalyani Venkataraman, Chennai
ಶಬ್ದಾರ್ಥಗಳು ಓಗರ = ಅರ್ಪಿತವಾಗಿರದ ಪದಾರ್ಥ; ಪದ = ಇದು ಭಾವದ ಸಂಕೇತ; ಪದಾರ್ಥ = ಯಾವುದನ್ನು ನಮ್ಮದೆಂದು ಭಾವಿಸುತ್ತೇವೆಯೋ ಅಂತಹ ಪಡಿಪದಾರ್ಥ; ಪ್ರಸಾದ = ಅರ್ಪಿತಗೊಂಡ ಪದಾರ್ಥ; ಮುಂದನು = ಅನಂತರ ಕಾಣಬಂದುದು, ಈ ಜಗತ್ತಿನ ವಸ್ತುಗಳು ನನ್ನವು ಎಂಬ ಭಾವ; ಹಿಂದೆ ನೋಡಿ = ವಿಶ್ವದ ಹಿಂದಿರುವ ಸತ್ಯವನ್ನು ನೋಡಿ; ವಿಶ್ವವೆಲ್ಲ ದೇವನ ಸಂಪದವಾಗಿದೆ ಎಂಬುದನ್ನು ಅರಿತು; Written by: Sri Siddeswara Swamiji, Vijayapura