ಶಬ್ದ ಸ್ಪರ್ಶ ರೂಪು ರಸ ಗಂಧ-ಪಂಚ ಇಂದ್ರಿಯ,
ಸಪ್ತಧಾತು ಅಷ್ಟಮದದಿಂದ
ಮುಂದುಗಾಣದವರು ನೀವು ಕೇಳಿರೆ;
ಲಿಂಗದ ವಾರ್ತೆಯ ವಚನದಲ್ಲಿ
ರಚನೆಯ ಮಾಡುವಿರಯ್ಯಾ,
ಸಂಸಾರದ ಮಚ್ಚು ಬಿಡದನ್ನಕ್ಕ,
ಸೂಕ್ಷ್ಮ ಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲ್ಲಿ ವಾಕು ಪಾಕವಾದಡೇನೊ,
ಮನ ಪಾಕವಾಗದನ್ನಕ್ಕ?
Transliteration Śabda sparśa rūpu rasa gandha-pan̄ca indriya,
saptadhātu aṣṭamadadinda
mundugāṇadavaru nīvu kēḷire;
liṅgada vārteya vacanadalli
racaneya māḍuvirayyā,
sansārada maccu biḍadannakka,
sūkṣma śivapathavu sādhyavāgadu.
Guhēśvaraliṅgadalli vāku pākavādaḍēno,
mana pākavāgadannakka?
Hindi Translation शब्द, स्पर्श, रूप, रस, गंध, पंचेंद्रिय
सप्तधातु, अष्टमद से आगे न देखनेवालों
आप सुनिए-
लिंग वार्तावचन करते हैं
संसार का व्यामोह न छोडने तक
सूक्ष्म शिवपथ साध्य नहीं होता।
गुहेश्वर लिंग में वाक् पक्व होतो क्या,
मनन पक्व होने तक ?
Translated by: Eswara Sharma M and Govindarao B N
Tamil Translation சுவை, ஒளி, ஊறு, ஓசை, நாற்றம், ஐம்புலன்கள்
ஏழு தாது, எண் மதங்களால்
உண்மையை உணரவியலாத நீவிர் கேண்மின்,
இலிங்கத்தைக் குறித்து சொற்பொழிவாற்றுவரையனே.
உலகியல் பற்று அகலும் வரையில்
சூட்சுமமான சிவபதத்தை அறியவியலாது.
குஹேசுவரலிங்கம் குறித்து பக்குவமான முறையில்
பேசிப்பயன் என்ன? மனம் பக்குவம் அற்ற பொழுது?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಲಿಂಗ = ಪರಮಸತ್ಯವಸ್ತು, ವಿಶ್ವದ ಆದಿ ಮತ್ತು ಅಂತ್ಯ, ಎಲ್ಲವನ್ನು ಒಳಗೊಂಡ ತತ್ವ್ತ; ಶಿವಪಥ = ಲಿಂಗತತ್ವ್ತವನ್ನು ಅಪರೋಕ್ಷಗೊಳಿಸಿಕೊಡುವ ಭಕ್ತಿಪಥ, ಶಿವಯೋಗ;
Written by: Sri Siddeswara Swamiji, Vijayapura