ಭಾವದಲೊಬ್ಬ ದೇವರ ಮಾಡಿ,
ಮನದಲೊಂದು ಭಕ್ತಿಯ ಮಾಡಿದಡೆ,
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು,
ಎತ್ತ ಹೋದರೈ ಗುಹೇಶ್ವರಾ?
Transliteration Bhāvadalobba dēvara māḍi,
manadalondu bhaktiya māḍidaḍe,
kāyada kaiyalli kāryavuṇṭe?
Vāyakke baḷaluvaru nōḍā.
Ettanēri ettanarasuvaru,
etta hōdarai guhēśvarā?
Hindi Translation भाव में एक देव बनाकर,
मन में एक भक्ति करें तो
क्या शरीर का कार्य सिद्ध होता है ?
छल से थकते हैं देखो।
बैल पर चढकर उसी बैल को ढूँढ ते
कहाँ गये गुहेश्वरा ?
Translated by: Eswara Sharma M and Govindarao B N
Tamil Translation மனத்தில் வேறு கடவுளை நிலைநிறுத்தி,
மனத்திலே பக்தியைச் செய்யின்,
கரத்தலத்திலுள்ள இலிங்கத்திற்கு கிரியையுண்டோ?
பயனற்று துன்புறுவர் காணாய்!
எருதின் மீது ஏறி, எருதைத் தேடுவோர்,
எங்கு செல்வர் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಯದ ಕೈ = ಸ್ಥೂಲಕಾಯದ ಕರಸ್ಥಲ, ಸೂಕ್ಷ್ಮಕಾಯದ ಮನಸ್ಥಲ; ಕಾರ್ಯ = ಕರಸ್ಥಲದ ಇಷ್ಟಲಿಂಗ, ಆ ಇಷ್ಟಲಿಂಗದ ಸೂಕ್ಷ್ಮ ರೂಹಾದ ಪ್ರಾಣಲಿಂಗ. ಭಕ್ತನ ಪೂಜೆ ಹಾಗೂ ಅನುಸಂಧಾನ
ಕ್ರಿಯೆಗಳಿಗೆ ಆ ಲಿಂಗವ;
Written by: Sri Siddeswara Swamiji, Vijayapura