•  
  •  
  •  
  •  
Index   ವಚನ - 197    Search  
 
ಭುವರ್ಲೋಕದ ಸ್ಥಾವರಕ್ಕೆ, ಸತ್ಯಲೋಕದ ಅಗ್ಘಣಿಯಲ್ಲಿ ಮಜ್ಜನಕ್ಕೆರೆದು, ದೇವಲೋಕದ ಪುಷ್ಪದಲ್ಲಿ ಪೂಜೆಯ ಮಾಡಿದಡೆ ಹತ್ತು ಲೋಕದಾಚಾರ ಕೆಟ್ಟಿತ್ತು. ಮೂರು ಲೋಕದರಸುಗಳು ಮುಗ್ಧರಾದರು. ಗುಹೇಶ್ವರಲಿಂಗವು ಸ್ಥಾವರಕ್ಕೆ ಸ್ಥಾವರವಾದನು.
Transliteration Bhuvarlōkada sthāvarakke, satyalōkada agghaṇiyalli majjanakkeredu, dēvalōkada puṣpadalli pūjeya māḍidaḍe hattu lōkadācāra keṭṭittu. Mūru lōkadarasugaḷu mugdharādaru. Guhēśvaraliṅgavu sthāvarakke sthāvaravādanu.
Hindi Translation भुवर्लोक के स्थावर को सत्यलोक के पवित्र जल से स्नानकरा के, देवलोक के पुष्प से पूजा करें तो, दसलोक आचार बिगड़ा था; तीनलोक के राजा मुग्ध हो गये। गुहेश्वर लिंग स्थावर को स्थावर बना ! Translated by: Eswara Sharma M and Govindarao B N
Tamil Translation புவர் லோகத்திலுள்ள ஸ்தாவரத்திற்கு சத்திய லோகத்திலுள்ள அமுத நீரில் திருமஞ்சனம் செய்து, தேவலோகத்திலுள்ள மலர்களால் அர்ச்சிப்பின், பத்து லோகத்தின் செயல்கள் அடங்கின மூவுலகை ஆளும் அரசுகள் மறைந்தன. குஹேசுவரலிங்கம் ஸ்தாவரத்திற்கு ஆதாரமாயினன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಈ ಮೂರು ಜಗತ್ತುಗಳನ್ನ = ವಿಶ್ವ ಜೀವ, ತೈಜಸ ಜೀವ ಮತ್ತು ಪ್ರಾಜ್ಞ ಜೀವ; ದೇವಲೋಕ = ಶಿರೋಮಧ್ಯದ ಪ್ರದೇಶ, ಅಲ್ಲಿರುವ ಸಹಸ್ರಾರವೇ ಪುಷ್ಪ; ಮೂರು ಲೋಕಗಳು = ಜಾಗ್ರ ಜಗತ್ತು, ಸ್ವಾಪ್ನ ಜಗತ್ತು ಮತ್ತು ಸುಪ್ತಿ ಜಗತ್ತು; ಸತ್ಯಲೋಕ = ಬ್ರಹ್ಮರಂಧ್ರ, ಆ ರಂಧ್ರದಿಂದ ಪ್ರವಹಿಸುವ ಆನಂದರೂಪ ಅಮೃತವೇ ಅಗ್ಗವಣಿ; ಸ್ಥಾವರ = ಸ್ಥಿರವಾದ ವಸ್ತು, ಆಧಾರ ಸತ್ಯ, ಅದುವೇ ಲಿಂಗ; ಸ್ಥಾವರಕ್ಕೆ ಸ್ಥಾವರ = ಸ್ಥಾವರವಾದುದಕ್ಕೆಲ್ಲ ಆಧಾರ; ಹತ್ತು ಲೋಕಗಳು = ಹತ್ತು ಇಂದ್ರಿಯಗಳು ; ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು; Written by: Sri Siddeswara Swamiji, Vijayapura