•  
  •  
  •  
  •  
Index   ವಚನ - 198    Search  
 
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ. ಹೂವಿಲ್ಲದ ಪರಿಮಳದ ಪೂಜೆ! ಹೃದಯಕಮಳದಲ್ಲಿ `ಶಿವಶಿವಾ' ಎಂಬ ಶಬ್ದ. ಇದು, ಅದ್ವೈತ ಕಾಣಾ ಗುಹೇಶ್ವರಾ.
Transliteration Prāṇaliṅgakke kāyave sejje, ākāśagaṅgeyalli majjana. Hūvillada parimaḷada pūje! Hr̥dayakamaḷadalli `śivaśivā' emba śabda. Idu, advaita kāṇā guhēśvarā.
Hindi Translation प्राणलिंग को शरीर ही सज्जा, आकाश गंगा से स्नान, बिना पुष्प परिमल की पूजा। हृदय कमल में शिव शिवा शब्द यह अद्वैत देखो गुहेश्वरा। Translated by: Eswara Sharma M and Govindarao B N
Tamil Translation பிராணலிங்கத்திற்கு உடலே பேழை, ஆகாய கங்கையில் திருமஞ்சனம், மலரற்ற நறுமணத்தில் பூஜை, இதய கமலத்தில் “சிவசிவா” எனும் ஒலி இது அத்துவைதம் காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾಶಗಂಗೆ = ಶಿರೋಮಧ್ಯದಲ್ಲಿರುವ ಬ್ರಹ್ಮರಂಧ್ರದಿಂದ ಹೊನಲಾಗಿ ಹರಿಯುವ ಅಮೃತ; ಆನಂದ ಜಲ; ಕಾಯ = ಸೂಕ್ಷ್ಮದೇಹ, ಮನಸ್ಸು; ಸೆಜ್ಜೆ = ಕರಡಿಗೆ, ಲಿಂಗವತ್ತಿಗೆ, ಲಿಂಗನಿಲಯ; ಹೂವಿಲ್ಲದ ಪರಿಮಳ = ಸದ್ಬಾವ; ಲಿಂಗದಿಂದ ತಾನು ಭಿನ್ನನಲ್ಲ ಎಂಬ ಅನನ್ಯಭಾವ; Written by: Sri Siddeswara Swamiji, Vijayapura