ಅಚಲಸಿಂಹಾಸನವನಿಕ್ಕಿ;
ನಿಶ್ಚಲ ಮಂಟಪದ ಸಂಚದೋವರಿಯೊಳಗೆ;
ರುಚಿಗಳೆಲ್ಲವ ನಿಲಿಸಿ
ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,
ವಚನ ವಿಚಿತ್ರದ ಪುಷ್ಪದ ರಚನೆ [ಯ] ನವರಂಗದಲ್ಲಿ,
ಖೇಚರಾದಿಯ ಗಮನ.
ವಿಚಾರಿಪರ ನುಂಗಿ ಗುಹೇಶ್ವರ ನಿಂದ ನಿಲುವು
ಸಚರಾಚರವ ಮೀರಿತ್ತು.
Transliteration Acalasinhāsanavanikki;
niścala maṇṭapada san̄cadōvariyoḷage;
rucigaḷellava nilisi
pan̄caratnada śikhara, min̄cukōṭiya kaḷasa,
vacana vicitrada puṣpada racane [ya] navaraṅgadalli,
khēcarādiya gamana.
Vicāripara nuṅgi guhēśvara ninda niluvu
sacarācarava mīrittu.
Hindi Translation अचल सिंहासन रखकर,
निश्चल मंटप में संग्रह कमरे में इच्छितवस्तुओं को रखकर,
पंचरत्न का शिखर, करोड बिजली जैसी कलश,
नवरंग में वचन चित्रपुष्प रचना
खेचरादियों के गमन विचारशील बुद्धि को निगलकर,
गुहेश्वर के खडे होने की स्थिति सचराचर से अधिक थी।
Translated by: Eswara Sharma M and Govindarao B N
Tamil Translation உறுதியாக சுகாசனத்தில் அமர்ந்து,
அசையாத உடலில் இதயக் கோயிலில்
புலனின்பங்களைத் துறந்து,
ஐந்தெழுத்தாலான சிகரம், ஒளிரும் ஓம்கார கலசம்
ஞானதள மலர்களை சாத்திர நியமத்துடன் செதுக்கிய நவரங்கத்தில்,
ஒடுங்கிய வாயுக்களுடன் ஆராயும் அறிவு அடங்கிட
குஹேசுவரனின் இருப்பு சராசரத்தை மீறிய நிலையன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಪಂಚರತ್ನದ ಶಿಖರ = ಬಿಂದು ಸಹಿತವಾದ ಪಂಚವರ್ಣಗಳು, ನಂ, ಮಂ, ಶಿಂ, ವಾಂ ಮತ್ತು ಯಂ,
ಈ ಪಂಚವರ್ಣಗಳಿಂದ ರಚನೆಗೊಂಡ ಶಿಖರ; ಮಿಂಚುಕೋಟಿಯ ಕಲಶ = ಪ್ರಚಂಡ ಪ್ರಭಾಮಯ ಓಂಕಾರ ಪ್ರಣವವು ಕಲಶ; ವಿಚಾರಪರವು = ವಿಚಾರಶೀಲವಾದ ಬುದ್ದಿ; ಸಚರಾಚರ = ಚಲನಶೀಲವಾದ ಪ್ರಾಣಾದಿಗಳು ಮತ್ತು ಜಡ ಎನಿಸುವ ದೇಹ;
Written by: Sri Siddeswara Swamiji, Vijayapura