Index   ವಚನ - 220    Search  
 
ಅಡವಿಯಲೊಂದು ಮನೆಯ ಮಾಡಿ, ಆಶ್ರಯವಿಲ್ಲದಂತಾಯಿತ್ತು. ನಡುನೀರಿನ ಜ್ಯೋತಿಯ, ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು. ಗುಹೇಶ್ವರಾ, ನಿಮ್ಮ ಶರಣರ ಎರವಿನ ಲಿಂಗ ಮೂರು ಲೋಕಕ್ಕೆ!