Index   ವಚನ - 221    Search  
 
ಕಲ್ಪಿತದುದಯ ಸಂಕಲ್ಪಿತದ ಸುಳುಹು ಪವನಭೇದವನರಿಯದೆ, ಪ್ರಾಣಲಿಂಗವೆಂಬುದು ಅಂಗಸಂಸಾರಿ, ಜಂಗಮವೆಂಬುದು ಲಿಂಗಸಂಸಾರಿ. ಪರವಲ್ಲ ಸ್ವಯವಲ್ಲ, ನಿರವಯ, ಗುಹೇಶ್ವರನೆಂಬ ಲಿಂಗಕ್ಕೆ ನಾಚರು ನೋಡಾ.