ಯೋಗದಾಗೆಂಬುದನಾರು ಬಲ್ಲರೊ?
ಅದು ಮೂಗ ಕಂಡ ಕನಸು!
ನಡೆವ ಬಟ್ಟೆ ಮೂರು, ನಡೆಯದ ಬಟ್ಟೆ ಒಂದೆ!
ಒಂದನೊಂಬತ್ತ ಮಾಡಿ ನಡೆದೆಹೆವೆಂಬರು
ಒಂಬತ್ತನೊಂದ ಮಾಡಿ ನಡೆದೆಹೆವೆಂಬ[ನ್ನಕ್ಕರ],
ಮೂರು ಮುಖದ ಕತ್ತಲೆ
ಒಂದು ಮುಖವಾಗಿ ಕಾಡುತ್ತಿಪ್ಪುದು.
ಪ್ರಾಣಲಿಂಗಸಂಬಂಧವೆಲ್ಲಿಯದು ಹೇಳಾ ಗುಹೇಶ್ವರಾ.
Transliteration Yōgadāgembudanāru ballaro?
Adu mūga kaṇḍa kanasu!
Naḍeva baṭṭe mūru, naḍeyada baṭṭe onde!
Ondanombatta māḍi naḍedehevembaru
ombattanonda māḍi naḍedehevemba[nnakkara],
mūru mukhada kattale
ondu mukhavāgi kāḍuttippudu.
Prāṇaliṅgasambandhavelliyadu hēḷā guhēśvarā.
Hindi Translation योगानंद को कौन जानते? वह गूंगे के सपने जैसे।
चलनेवाली राह तीन, न चलनेवाली राह एक।
एक को नौ बनाकर चले कहते हैं।
नौ को एक बनाकर चले कहने तक
तीन मुँखों का अंधेरा एक ही मुख बनकर सता रहा है।
प्राणलिंग संबंध कहाँ है गुहेश्वरा?
Translated by: Eswara Sharma M and Govindarao B N
Tamil Translation யோகத்தினால் விளையும் இன்பத்தை யாரறிவர்?
அது ஊமை கண்ட கனவனையது
நடந்து செல்லும் வழிமூன்று, நடக்காத வழி ஒன்றே!
ஒன்றை ஒன்பதாக்கி சாதனை செய்தோம் என்பர்
ஒன்பதை ஒன்றாக்கி சாதனை புரிவர்
மூன்று முகத்தின் இருள் ஒரே முகமாகி துன்புறுத்தியது
பிராணலிங்கத் தொடர்பு எங்ஙனம் ஏற்படும் குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಒಂದನೊಂಬತ್ತು ಮಾಡಿ ನ = ಒಂದನ್ನು ಒಂಭತ್ತು ಮಾಡಿ ಆ ಮೂಲಕ ಸಾಧನೆ ಮಾಡಿದ್ದೇವೆ.; ಒಂದು = ಚಿತ್ತ; ಕತ್ತಲೆ = ಮಾಯೆ; ಯೋಗ = ಶಿವಯೋಗ; ಯೋಗದ ಆಗು = ಶಿವಯೋಗದಿಂದ ಬರುವ ಆನಂದಾನುಭವ;
Written by: Sri Siddeswara Swamiji, Vijayapura